ಶ್ರೀನಿವಾಸಪುರ ರಾಜಕೀಯ ಚದುರಂಗ: ಈ ಬಾರಿ 'ಚಾಣಕ್ಯ' ರಮೇಶ್ ಕುಮಾರ್ ಅವರತ್ತ ಒಲಿದಿದೆಯೇ ಅದೃಷ್ಟ?

ಜೆಡಿಎಸ್ ಕುಟುಂಬದ ಹಗರಣಗಳು ಮತ್ತು ಮೈತ್ರಿ ರಾಜಕೀಯದ ಗೊಂದಲಗಳ ನಡುವೆ, ಶ್ರೀನಿವಾಸಪುರದಲ್ಲಿ 'ಚುನಾವಣಾ ಚಾಣಕ್ಯ' ರಮೇಶ್ ಕುಮಾರ್ ಅವರಿಗೆ ಗೆಲುವಿನ ಹಾದಿ ಸುಗಮವಾಗಿದ್ದು, ಈ ಬಾರಿ ಅವರಿಗೆ ಕ್ಷೇತ್ರದಲ್ಲಿ ಯಾವುದೇ ಪೈಪೋಟಿ ಇಲ್ಲದಂತಾಗಿದೆ.

ಕೋಲಾರ ವಾರ್ತೆ

Rohan Gowda

5/13/20261 min read

ಶ್ರೀನಿವಾಸಪುರ:

ರಾಜ್ಯ ರಾಜಕಾರಣದ ದಿಕ್ಸೂಚಿ ಎಂದೇ ಕರೆಯಲ್ಪಡುವ ಕೋಲಾರ ಜಿಲ್ಲೆಯ ರಾಜಕೀಯದಲ್ಲಿ ಯಾರು ಏನೇ ಹೇಳಲಿ ಜಿಲ್ಲಾ ರಾಜಕೀಯ ಎಂದರೆ ಮೊದಲು ಕಾಣುವುದು ನಮ್ಮ ಶ್ರೀನಿವಾಸಪುರದ ಅಂದರೆ ರಮೇಶ್ ಕುಮಾರ್ ರವರು. ಜಿಲ್ಲೆಯ ಚುನಾವಣಾ ಚಾಣಕ್ಯ ಎಂದೇ ಹೆಸರಾದ ರಮೇಶ್ ಕುಮಾರ್ ಅವರು ಪ್ರಸಕ್ತ ಒಂದಿಷ್ಟು ಲಯ ಕಳೆದುಕೊಂಡಿರುವುದಕ್ಕೆ ಕಾರಣ 50% ಜನಾದೇಶ ಆದರೆ ಮತ್ತೊಂದು 50% ಜಿಲ್ಲೆಯಾದ್ಯಂತ ನೈಜ ರಾಜಕೀಯಕ್ಕಿಂತ ಸ್ವಾಭಿಮಾನ ರಹಿತ ಮತದಾರರು ಹೆಚ್ಚುತ್ತಿರುವುದು.

ಪರಂಪರೆ ಮತ್ತು ಮೌಲ್ಯಗಳ ಸಂಘರ್ಷ: ಪ್ರಸಕ್ತ ಜಿಲ್ಲೆಯ ಅತ್ಯಂತ ತಮ್ಮ ಮಕ್ಕಳ ಭವಿಷ್ಯವನ್ನು ಮತ್ತು ತಮ್ಮ ದೊಡ್ಡವರು ತಂದಿಟ್ಟ ಗೌರವಗಳನ್ನು ಮರೆತು ಕೇವಲ ಪುಡಿಗಾಸಿಗೆ ಮತ್ತು ಕಪ್ಪುಹಣದ ಕಪ್ಪು ಮಾಯೆಗೆ ಮಣಿದು ರಾಷ್ಟ್ರದ ಮೌಲ್ಯಗಳನ್ನು ಮರೆಯುತ್ತಿರುವ ಮಂದಿ ಹೆಚ್ಚಾಗುತ್ತಿರುವುದು ವಿಷಾದನೀಯ. ಅದೇನೇ ಇರಲಿ ಶ್ರೀನಿವಾಸಪುರ ತಾಲೂಕು ಎಂದರೆ ಅಲ್ಲಿ ನಮಗೆ ಕಾಣುವುದು ಇಬ್ಬರೇ ರಾಜಕಾರಣಿಗಳು ಒಬ್ಬರು ಪ್ರಸಕ್ತ ಶಾಸಕರಾಗಿರುವ ಜೆಡಿಎಸ್ ನ ವೆಂಕಟ ಶಿವ ರೆಡ್ಡಿ ರವರು ಆದರೆ ಮತ್ತೊಬ್ಬರು ಜಿಲ್ಲೆಯ ಚಾಣಕ್ಯ ರಮೇಶ್ ಕುಮಾರ್ ಅವರು. ಇವರಿಬ್ಬರನ್ನು ಅನ್ಯ ಕ್ಷೇತ್ರಗಳಿಗೆ ಹೋಲಿಸಿದಾಗ ಜನರು ವಿಭಿನ್ನ ರೀತಿಯಲ್ಲಿ ಇಷ್ಟಪಡುತ್ತಾರೆ. ಕಾರಣ ಏನೇ ಇರಲಿ ಇಬ್ಬರಿಗೂ ಅವರದೇ ಆದ ವರ್ಚಸ್ಸು ಇದೆ. ಒಂದು ಬಾರಿ ಒಬ್ಬರು ಗೆದ್ದರೆ ಮತ್ತೊಂದು ಬಾರಿ ಮತ್ತೊಬ್ಬರು ಗೆಲ್ಲುವುದು ಸಹಜ ಎಂಬಂತಹ ವಾತಾವರಣ ಅತಿ ಹೆಚ್ಚು ನಡೆಯುತ್ತಾ ಬಂದದ್ದು ಕಂಡಿದ್ದೇವೆ, ಕೆಲವೊಂದು ಬಾರಿ ಅದು ಏರಿಳಿತ ವಾದದ್ದು ನಾವು ಕಂಡಿದ್ದೇವೆ.

ಜೆಡಿಎಸ್ ಮುಂದಿರುವ ಸವಾಲುಗಳು:

ಅನ್ಯ ಕ್ಷೇತ್ರಗಳಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿದ್ದರೆ ಈ ಕ್ಷೇತ್ರದಲ್ಲಿ ಮಾತ್ರ ಸ್ವಾಮಿ ಮತ್ತು ರೆಡ್ಡಿ ಇವರ ಹವಾ ಜಾಸ್ತಿ. ಇನ್ನು ಈ ಬಾರಿಯ ಚುನಾವಣೆ ನೋಡಿದಾಗ ಒಂದು ಕಡೆ ಪ್ರಸಕ್ತ ಇರುವ ಶಾಸಕರಾದ ಜೆಡಿಎಸ್ ನ ವೆಂಕಟಶಿವ ರೆಡ್ಡಿ ರವರು ತಮ್ಮ ಚುರುಕಿನ ಚಟುವಟಿಕೆಗೆ ಒಂದಿಷ್ಟು ಅಡಚಣೆಯಾಗಿ ವಯಸ್ಸು ಎಂಬುದು ಕಾಡುತ್ತಿರುವುದು ಸಮಾಜದಲ್ಲಿ ಆಗುತ್ತಿರುವ ಸಹಜ ವಿಷಯ. ಆದರೆ ಈಗಾಗಲೇ ಜೆಡಿಎಸ್ ಪಕ್ಷ ತನ್ನ ಪ್ರಾದೇಶಿಕ ಸೊಗಡನ್ನು ಮರೆತು ಸೈದ್ಧಾಂತಿಕ ಹಿನ್ನೆಲೆಯನ್ನು ಬಿಟ್ಟು ಬಿಜೆಪಿಯ ಮೊರೆ ಹೋಗಿರುವುದು ಶ್ರೀನಿವಾಸಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಹಳ ರಾಜಕೀಯದ ಆಘಾತ ಆಗಿರುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಇಲ್ಲಿಯವರೆಗೆ ಈ ತಾಲೂಕಿನಲ್ಲಿ ಬಿಜೆಪಿ ಯಾವುದೇ ಸಾಧನೆ ಮಾಡಿಲ್ಲ. ಆದರೆ ವಿಪರ್ಯಾಸವೆಂದರೆ ರಾಜ್ಯ ನಾಯಕರ ಶರಣಾಗತಿಗೆ ಶ್ರೀನಿವಾಸಪುರದ ಸುದೀರ್ಘ ಕಾಲದ ಬಲಿಷ್ಠ ಜೆಡಿಎಸ್ ಈ ತೀರ್ಮಾನದಿಂದ ಒಂದಿಷ್ಟು ಕದಡಿ ಇರುವುದು ಸತ್ಯ. ಇನ್ನು ಅಲ್ಪಸಂಖ್ಯಾತರ ಮತಗಳನ್ನು ಆಕರ್ಷಿಸುತ್ತಿದ್ದ ಜೆಡಿಎಸ್ ಗೆ ಅಲ್ಪಸಂಖ್ಯಾತರ ಮತಗಳು ಇನ್ನಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಉಳಿದಂತೆ ಕೇವಲ ಹಿಂದುತ್ವ ಅಜೆಂಡಾ ಅತಿ ಹೆಚ್ಚು ಕಡೆ ಪ್ರಕರಿಸುತ್ತಿರುವ ಬಿಜೆಪಿಯ ಜೊತೆ ಪ್ರಾದೇಶಿಕ ಪಕ್ಷ ಜೆಡಿಎಸ್ ಸಹ ಹಿಂದುತ್ವದ ಮುಖಾಂತರ ರಾಷ್ಟ್ರೀಯತೆಯನ್ನು ಕಟ್ಟುತ್ತೇವೆ ಎಂಬ ಹೊಸ ವಿಷಯಕ್ಕೆ ಬಂದಿರುವುದು ಮತ್ತೊಂದು ಸುದ್ದಿಯಾಗಿದೆ.

ರೆವಣ್ಣ ಕುಟುಂಬದ ಕಳಂಕ ಮತ್ತು ಜನರ ಆಕ್ರೋಶ:

ವರ್ಷಾನುಗಟ್ಟಲೆ ಪ್ರಾದೇಶಿಕ ಪಕ್ಷದಿಂದ ನಮ್ಮ ರಾಜ್ಯದಿಂದ ಗೌರವಯುತ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಏಕೈಕ ವ್ಯಕ್ತಿಯಾಗಿ ಅನೇಕ ಅಭಿಮಾನಿಗಳನ್ನು ಗಳಿಸಿದ್ದ ದೇವೇಗೌಡರೇ ಪಕ್ಷದ ಪ್ರಮುಖ ಬಲ. ಆದರೆ ಈ ನಡುವೆ ಅವರ ಕುಟುಂಬದ ವ್ಯಾಪ್ತಿಯಲ್ಲಿ ಕಷ್ಟಪಟ್ಟು ಮೊಮ್ಮಗನನ್ನು ಗೆಲ್ಲಿಸಿದ್ದು ಇದೇ ದೇವೇಗೌಡರು. ಆದರೆ ಮತ ಕೇಳುವಾಗ ತಾಯಂದಿರೆ ಎಂದು ಮತಯಾಚನೆ ಮಾಡಿ ಮತ ಹಾಕಿಸಿಕೊಂಡು ಗೆದ್ದ ನಂತರ ಪ್ರಜ್ವಲ್ ರೇವಣ್ಣ ಮಾಡಿದಾ ಕೆಲಸಕ್ಕೆ ಇಡೀ ಗೌಡರ ಕುಟುಂಬ ಖಿನ್ನತೆಗೆ ಜಾರಿದ್ದು ಸತ್ಯವೇ ಸರಿ. ಮತ್ತೊಂದು ಕಡೆ ಕಾಮುಕ ಮೊಮ್ಮಗ ಪ್ರಜ್ವಲ್ ರೇವಣ್ಣ ಮಾಡಿದ ಹೀನ ಕೃತ್ಯಕ್ಕೆ ಬಲಿಯಾದ ಅಮಾಯಕ ಹೆಣ್ಣು ಮಕ್ಕಳು, ಅವರ ಪರವಾಗಿ ಮತ ಹಾಕಿಸಲು ಬಂದು ಒಬ್ಬ ಕಾಮುಕನನ್ನು ಗೆಲ್ಲಿಸಿದ ಜನರು ಒಮ್ಮೆಯಾದರೂ ಮಹಿಳೆಯರಿಗೆ ಕ್ಷಮೆ ಕೇಳಲಿಲ್ಲ ಎಂಬ ರಾಜ್ಯದ ಅನೇಕ ಹೆಣ್ಣುಮಕ್ಕಳಲ್ಲಿ ನೋವಿನ ಸಂಗತಿ ಇರುವುದು ಸತ್ಯ.

ಮತ್ತೊಂದು ಕಡೆ ಬಿಜೆಪಿಯ ಮಹಿಳಾ ಮೀಸಲಾತಿ ಬಿಲ್ ವಿಚಾರ ಇರುವುದು ಒಂದು ಕಡೆಯಾದರೆ, ತೆನೆ ಹೊತ್ತ ಮಹಿಳೆಯನ್ನೇ ಚಿನ್ಹೆಯಾಗಿರಿಸಿರುವ ಜೆಡಿಎಸ್ ಮಹಿಳೆಯರಿಗೆ ಮೀಸಲಾತಿ ಟಿಕೆಟ್ ಹಂಚಿಕೆಯಲ್ಲಿ ಎಷ್ಟು ಪರ್ಸೆಂಟ್ ನೀಡುತ್ತದೆ ಎಂದು ಕಾಯುತ್ತಿರುವ ಮತದಾರರು ಹಾಗೂ ಇವೆಲ್ಲದರ ಮಧ್ಯೆ ಮತ್ತೊಂದು ಆಘಾತಕಾರಿ ವಿಷಯವೆಂದರೆ ಸೂರಜ್ ರೇವಣ್ಣ ರವರ ವಿಚ್ಛೇದನ ಮತ್ತು ಅದಕ್ಕೆ ಸಂಬಂಧಪಟ್ಟ ಸಲಿಂಗ ಕಾಮದ ಆರೋಪಗಳ ನೆರಳು ಇವೆಲ್ಲವೂ ಜೆಡಿಎಸ್ ಗೆ ಸವಾಲುಗಳೇ ಆಗಿದೆ.

ರಮೇಶ್ ಕುಮಾರ್ ಅವರಿಗೆ ವರದಾನ:

ಈ ಎಲ್ಲದರ ಮಧ್ಯೆ ಅನೇಕರು ಜೆಡಿಎಸ್ ನಿಂದ ಈಗಾಗಲೇ ವೆಂಕಟ ಶಿವ ರೆಡ್ಡಿ ರವರನ್ನು ಮುನ್ನಲೆಗೆ ತರುವುದನ್ನು ಬಿಟ್ಟು ಅನ್ಯ ಅಭ್ಯರ್ಥಿಗಳನ್ನು ಸೂಚಿಸುತ್ತಿರುವುದು ಆಶ್ಚರ್ಯಕರವಾಗಿದೆ. ಆದರೆ ಇದೇನೇ ಇರಲಿ ಗಾಯಗೊಂಡ ಹುಲಿಯಂತೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಸಮಬಲ ಮತ್ತು ಚಾಣಕ್ಯತೆ ಹೊಂದಿರುವ ರಮೇಶ್ ಕುಮಾರ್ ರವರಿಗೆ ಇವೆಲ್ಲವೂ ಒಳ್ಳೆಯ ಅವಕಾಶಗಳು. ಮತ್ತೊಂದು ಕಡೆ ಈ ಒಂದು ಬಾರಿ ರಮೇಶ್ ಕುಮಾರ್ ರವರನ್ನು ಗೆಲ್ಲಿಸಲೇ ಬೇಕು ಎಂದು ಅನೇಕ ಹಿರಿಯರು ಮತ್ತು ಉತ್ಸಾಹಿಗಳು ಈಗಾಗಲೇ ಚಟುವಟಿಕೆಗಳಿಗೆ ಇಳಿದಿರುವುದು ಕಂಡುಬರುತ್ತಿದೆ.

ಗೆದ್ದರೆ ತಾಲೂಕಿಗೆ ಲಾಭ:

ರಮೇಶ್ ಕುಮಾರ್ ರವರು ಒಂದು ವೇಳೆ ಈ ಬಾರಿ ಶ್ರೀನಿವಾಸಪುರ ಕ್ಷೇತ್ರವನ್ನು ಗೆದ್ದರೆ ಶ್ರೀನಿವಾಸಪುರ ಜನತೆಗೆ ಒಂದಂತೂ ಲಾಭದಾಯಕ ಸಿಕ್ಕೆ ಸಿಗುತ್ತದೆ. ಅದೇನೆಂದರೆ ರಾಜ್ಯ ಮಟ್ಟದ ರಾಜಕೀಯ ವ್ಯವಸ್ಥೆಯಲ್ಲಿ ಮತ್ತೊಮ್ಮೆ ಶ್ರೀನಿವಾಸಪುರ ತಾಲೂಕು ಹೆಸರು ಮಾಡುವುದರಲ್ಲಿ ಸಂಶಯವಿಲ್ಲ. ಏಕೆಂದರೆ ರಮೇಶ್ ಕುಮಾರ್ ರವರು ಗೆದ್ದರೆ ಮತ್ತೊಮ್ಮೆ ಕೋಲಾರ ಜಿಲ್ಲೆಯ ರಾಜಕೀಯವನ್ನು ಅಲುಗಾಡಿಸುತ್ತಾರೆ ಎಂಬ ಭಯ ಈಗಾಗಲೇ ಅಧಿಕಾರದಲ್ಲಿರುವ ಅವರದೇ ಪಕ್ಷದ ಕೆಲವು ಶಾಸಕರು ಮತ್ತು ಹಿಂಬಾಲಕರಿಗೆ ಭಯ ಇದ್ದೇ ಇರುತ್ತದೆ. ಇದೇ ಕಾರಣಕ್ಕೆ ಸ್ವಪಕ್ಷದವರೇ ರಮೇಶ್ ಕುಮಾರ್ ರವರನ್ನು ಈ ಹಿಂದೆ ಮಾಡಿದಂತೆ ಸೋಲಿಸಬಹುದು ಎಂಬ ಆಶಯ ಪ್ರಸಕ್ತ ಎದುರಾಳಿಗಳಿಗೆ ಇರುವುದು ಬಿಟ್ಟರೆ, ನೇರ ನೇರ ಸವಾಲು ಎಂದು ಬಂದಾಗ ರಮೇಶ್ ಕುಮಾರ್ ಅವರಿಗೆ ಈ ಬಾರಿ ಶ್ರೀನಿವಾಸಪುರದಲ್ಲಿ ಪೈಪೋಟಿಯೇ ಇಲ್ಲ.

ವರದಿ: ರೋಹನ್ ಗೌಡ